Friday, August 1, 2008

ಕತ್ತಲ ಮೇಲೆ

ಭುವಿಯು ರೆಪ್ಪೆ ಮುಚ್ಚಿದ ವೇಳೆ
ಬೆಳಕು ಬತ್ತಲಾಗಿ
ಕತ್ತಲಾಗಿದೆ ನೋಡು


ಬದುಕು ಬಳುಕುವ ವೇಳೆ
ಉಸಿರ ತುಡಿತಕ್ಕೊಂದು
ಪದವ ಹಿಡಿದು


ನಿನ್ನೆ-ನಾಳೆಗಳ ಜೊತೆಗೆ ಹೆಣೆದು
ಇಂದಿಗೊಂದಿಷ್ಟು ಇಂಬುಕೊಟ್ಟು
ವರ್ತಮಾನದ ಸಾಲು ಬರೆದು


ಗಡಿಯಾರದ ಮುಳ್ಳು ಕಿತ್ತು
ಸಮಯದಲದ್ದಿ, ಬದುಕಿಗೊಂದು
ಭಾಷ್ಯ ಬರೆದಿರಲು


ಮಬ್ಭುಗತ್ತಲ ಬಾಳ ಮೇಲೆ
ಬೆಳಕಿನಿಂದಲೇ ಒಂದು
ಕವಿತೆ ಮುಡಿತು ನೋಡು.

5 comments:

jomon varghese said...

ಚೆಂದದ ಕವಿತೆ

Anonymous said...

Hi ಮಹೇಶ್ ರವರೆ,
ಒಳ್ಳೆಯ ಮಳೆ ! ಚೆ೦ದದ ಕವನ. 'niharika' ಏಕೋ ಖಾಲಿ ಖಾಲಿಯಾಗಿದೆ! ಬೇಗ ತು೦ಬಿಸಿ...
~ಸುಷ್ಮ ಸಿ೦ಧು

mahesh said...

@ malehani
thanks..

@ sushmasindhu..
thanks..
ತಡವಾಗಿ blog update ಮಾಡಿದ್ಡಕ್ಕೆ ಕ್ಷಮೆ ಇರಲಿ ..

Vasudev Kamath said...

ಮಾಚಾ ಇನ್ನು ಬದಲಾಗಿಲ್ಲ ಮಾರೆ.. ನನಗೆ ನಿನ್ನ ಕವಿತೆಗಳು ಮೊದಲಿನಿಂದಲೆ ಅರ್ಥ ಮಾಡಿಕೊಳ್ಳಲು ಕಷ್ಟವಾಗ್ತಾ ಇತ್ತು ಈಗ್ಲೂ ಹಾಗೆ :D ಹೀಗೆ ಮುಂದುವರಿಸು

ashwin said...

ಗಡಿಯಾರದ ಮುಳ್ಳು ಕಿತ್ತು
ಸಮಯದಲದ್ದಿ, ಬದುಕಿಗೊಂದು
ಭಾಷ್ಯ ಬರೆದಿರಲು

WOW!!! really enticed by the line.