Tuesday, March 29, 2011



ಉಮ್ಮಳಿಸುತ್ತವೆ ಬಾವಗಳು
ಒಮ್ಮೊಮ್ಮೆ ತಡೆಯಲಾಗದಂತೆ

ಮತ್ತೋಮ್ಮೆ ತದವರಿಸುತ್ತದೆ
ಪದಗಳಾಗದಂತೆ

ಎಲ್ಲವನೂ ಹೇಳಿಬಿಡುತ್ತದೆ
ಕಣ್ಣು ಬಚ್ಚಿಡಲಾಗದೆ

ಪದಗಳಿಗೊಂದು ರಾಗ ಸಿಗದೆ
ಕಮರುತ್ತದೆ ಬಯಕೆಗಳು

ಕಂಠದಲ್ಲೇ ಅಸುನೀಗುತ್ತದೆ
ರಾಗಗಳು ಹಾಡಲಾಗದಂತೆ

ಯಾವುದು ಸ್ಥಾಯೀ?
ಮೌನವೋ ರಾಗವೋ?

ಹಾಳೆಯ ಮೇಲಿನ ಪದಗಳು
ಮುಕ್ತಿಗಾಗಿ ಕಾದಿವೆ

ಹಾಡು ಹಕ್ಕಿಯ ಕಂಠದ ಇಂಪು
ಶೃತಿಯ ಮರೆತು ಕುಳಿತಿದೆ.

3 comments:

Subramanya Hegde said...

Manassu mutto kavite... halavu prashnegala sangraha.. vicharapoornavagide :)

Anonymous said...

ಚೆನ್ನಾಗಿದೆ ,

ಕಂಠದಲ್ಲೇ ಅಸುನೀಗುತ್ತದೆ
ರಾಗಗಳು ಹಾಡಲಾಗದಂತೆ

ರಾಗಗಳು ಪದಕ್ಕಿಂತ ಸ್ವರಗಳು ಹೆಚ್ಚು ಸೂಕ್ತ ಎಂಬುದು ನನ್ನ ಭಾವನೆ

mahesh said...

@Subbu; Thanks bro:)

@Nithesh; Thanks:)
ಆ ಸಾಲಲ್ಲಿ ಕವಿತೆಯೊಂದು ಹಾಡಾಗಲು ಸೋತ ಬಗ್ಗೆ ಬರೆಯಲು ಪ್ರಯತ್ನಪಟ್ಟಿದ್ದೆನೆ, ಅಲ್ಲಿ ಪದಗಳು, ಸ್ವರಗಳೂ ಇವೆ ಅದರೆ ಪದಳನ್ನು ಒಂದಾಗಿ ಹೆಣೆಯ ಬಹುದಾದ ರಾಗದ ಕೊರತೆಯಿದೆ ಎಂಬ ಅರ್ಥದಲ್ಲಿ... so.. ಆ ಕ್ಷಣದಲ್ಲಿ ರಾಗ ಸೂಕ್ತ ಅನಿಸಿತು ಅಷ್ಟೆ