Thursday, May 1, 2008

ಕೆಲವು ಹನಿಗಳು

ಪುಸ್ತಕದ ಖಾಲಿ ಹಾಳೆಗಳ ನಡುವೆ
ಒಣಗಿದ ಗುಲಾಬಿ ಮೊಗ್ಗು
ಅರಳಿದೆ ಮನ


ಮಳೆಗಾಲದ ಸಂಜೆ
ಕಣ್ಣೀರಲ್ಲೂ
ಕಾಮನಬಿಲ್ಲು


ನೀಳ ಜಡೆಯ ಮೇಲೆ
ಕನಕಾಂಬರದ ಕಂಪು
ಕಾಣದ ಕೆನ್ನೆಯ ಮೇಲೆ
ಕಂಬನಿ ಇಳಿದಿದೆ



ರೊಮಾಂಚನದ ಸಂಜೆ
ಮಾತು ಮುರಿದ ಹುಡುಗಿ
ಕಣ್ಣಲ್ಲೇ ಮಾತಾಗುತ್ತಾಳೆ.



ಬೀಸಿದೆ ಗಾಳಿ
ಬೆಳಕ ಹಿಡಿದ ಕೈಗೆ
ಮುಗಿದ ತೈಲದ
ಅರಿವೇ ಇಲ್ಲ

3 comments:

Unknown said...

ಬೀಸಿದೆ ಗಾಳಿ
ಬೆಳಕ ಹಿಡಿದ ಕೈಗೆ
ಮುಗಿದ ತೈಲದ
ಅರಿವೇ ಇಲ್ಲ
tumba istha aaythu idhu.. nice

siri

ಕುಕೂಊ.. said...

ನಿಮ್ಮೆಲ್ಲ ಹನಿ ನನge ತುಂಬಾ ಖುಷಿ ಕೊಟ್ಟವು.

ಸ್ವಾಮಿ
ಪುಣೆ

mahesh said...

Thank you....
ನಿಮ್ಮ ಮೆಚ್ಚುಗೆ ನನಗೆ ಹೊಸ ಉತ್ಸಾಹ ನೀಡಿದೆ